ಪ್ಯೂಪ	- 	
ಪೂರ್ಣರೂಪಾಂತರ ಹೊಂದುವ ಕೀಟಗಳ ಜೀವನಚರಿತ್ರೆಯ ಒಂದು ಹಂತ.  ಈ ಹಂತದಲ್ಲಿ ಕೀಟಚಟುವಟಿಕೆಯಿರುವುದಿಲ್ಲ:  ಮರಿಯ ಅಂಗಗಳು ಪ್ರಬುದ್ಧಾವಸ್ಥೆಯ ಅಂಗಗಳಾಗಿ ಮಾರ್ಪಾಟಾಗುತ್ತವೆ.  ಇವುಗಳ ಆಕಾರದಲ್ಲಿ ತುಂಬ ವೈತ್ಯಾಸವನ್ನು ಕಾಣಬಹುದು.  ಮುಖ್ಯವಾದ ಪ್ಯೂಪಗಳು ಇಂತಿವೆ :

1 ಪ್ರಿಮಿಟಿವ್: ಪ್ಯೂಪ ಲೈಬೀರ ಎಂಬ ಹೆಸರಿನಿದು ಸರಳ.  ಹೊದಿಕೆ ಇಲ್ಲ.  ಉಪಾಂಗಗಳು ಕಾಣಿಸುತ್ತಿದ್ದು, ಪೌಢ ಕೀಟವನ್ನೇ ಹೋಲುತ್ತದೆ.  ಕೆಲವು ಕುಟುಂಬಗಳಲ್ಲಿ ಕೊನೆಯ ಸಲ ಪೊರೆ ಬಿಡುವುದಕ್ಕೆ ಮುಂಚೆ ಇವು ಚುರುಕಾಗುವುವು.  ಉದಾ: ನ್ಯೂರಾಪ್ಟ್ಪರ, ಮೀಕಾಪÀ್ಟರ, ಟ್ರೈಕಾಪ್ಟರ.  ಕೋಲಿಯಾಪ್ಟರ, ಡಿಪ್ಟರ, ಲೆಪಿಡಾಪ್ಟರ, ಹೈಮಿನಾಪ್ಟರ. 
 
2. ಜಟಿಲ: ಅಪೂರ್ಣ ಕೋಶ. ಕೋಶದ ಹೊಟ್ಟೆ ಚಲಿಸಬಲ್ಲುದು: ಉಪಾಂಗಗಳು ಬೇರೆ ಬೇರೆ ಒರೆಗಳಲ್ಲಿರುತ್ತವೆ.  ಉದಾ:  ಸೊಳ್ಳೆಗಳ ಕೋಶ, ಟಂಬ್ಲರ್ ಮಶಕಗಳು, ಕೆಲವು ತೆರನ ಡಿಪ್ಟರ, ಲೆಪಿಡಾಪ್ಟರ ಮತ್ತು ಕೋಲಿಯಾಪ್ಟರ.

ಅ. ಪ್ಯೂಪ ಅಬ್ಟೆಕ್ಟ: ಉಪಾಂಗಗಳೆಲ್ಲ ಒಟ್ಟು ಸೇರಿರುತ್ತವೆ ಅಥವಾ ಕೋಶದ ಶರೀರಕ್ಕೆ ಒತ್ತಿಕೊಂಡಿರುತ್ತವೆ.  ಇವುಗಳ ಮೇಲೆ ಚವರ್iದ ಪೊರೆ ಇದೆ.  ಚಲನೆ ಇಲ್ಲ. ಒಂದು ತುದಿಯಲ್ಲಿ ಕ್ರಿಮಾಸ್ಟರ್ ಎಂಬ ಮುಳ್ಳಿದೆ.  ಉದಾ; ಲೆಪಿಡಾಪ್ಟರ.

ಆ: ಪ್ಯೂಪ ಕೊಆಕ್ರ್ಟೀಟ: ಕೊನೆಯ ಚರ್ಮದ ಪೋರೆಯಲ್ಲಿ ಪ್ರಾಯದ ಕೀಟ ಅಡಗಿದ್ದು ಹೊರಕ್ಕೆ ಬರುತ್ತದೆ. 
                 		                                         
( ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ